ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಅಧಿಕೃತವಾಗಿ ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ, ಗಿನಿ ಕೊಲ್ಲಿಯಲ್ಲಿರುವ ಒಂದು ದ್ವೀಪರಾಷ್ಟ್ರ. ಮಧ್ಯ ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಗಾಬೊನ್ ದೇಶದ ತಟದಿಂದ ಸುಮಾರು ೨೨೫ ಮತ್ತು ೨೫೦ ಕಿ.ಮಿ. ದೂರದಲ್ಲಿರುವ ಸಾವೊ ಟೋಮೆ ದ್ವೀಪ ಮತ್ತು ಪ್ರಿನ್ಸಿಪೆ ದ್ವೀಪ ಈ ದೇಶದ ಭಾಗಗಳು.